Skip to main content

ಬಜೆಟ್ 2022- ಕ್ರಿಪ್ಟೋ ಇಂಡಸ್ಟ್ರಿಗೆ ಸಂಬಂಧಿಸಿದ ಪ್ರಮುಖ ಮುಖ್ಯಾಂಶಗಳು (Budget 2022 – Key highlights for the Crypto Industry)

By ಫೆಬ್ರವರಿ 1, 2022ಫೆಬ್ರವರಿ 16th, 20222 minute read

ಭಾರತವು ಕ್ರಿಪ್ಟೋ ವಲಯವನ್ನು ಕಾನೂನುಬದ್ಧಗೊಳಿಸುವ ಹಾದಿಯಲ್ಲಿದೆ ಎಂದು 2022ರ ಬಜೆಟ್ ಸ್ಪಷ್ಟವಾಗಿ ಸೂಚಿಸಿದೆ. ಭಾರತವು ಬ್ಲಾಕ್ ಚೈನ್-ಚಾಲಿತ ಡಿಜಿಟಲ್ ರೂಪಾಯಿಯನ್ನು ಪ್ರಾರಂಭಿಸುತ್ತಿರುವ ಸುದ್ದಿಯು ಖಂಡಿತವಾಗಿಯೂ ಆಟದ ಬದಲಾವಣೆಯಾಗಿದೆ.

ಕ್ರಿಪ್ಟೋ ಉತ್ಸಾಹಿಗಳು ಕಾನೂನುಬದ್ಧತೆ ಹಾಗೂ ತೆರಿಗೆಯ ಬಗ್ಗೆ ಸ್ಪಷ್ಟತೆ ಪಡೆಯಲು ಬಹಳ ಸಮಯದಿಂದ ಕಾಯುತ್ತಿದ್ದರು. ಈ ನಿಟ್ಟಿನಲ್ಲಿ 2022 ರ ಹಣಕಾಸು ಮಸೂದೆಯು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದೆ.

2022 ರ ಬಜೆಟ್ ನಲ್ಲಿ ಕ್ರಿಪ್ಟೋ ಸಂಬಂಧ ನಿರ್ದಿಷ್ಟ ಮುಖ್ಯಾಂಶಗಳು ಇಲ್ಲಿವೆ:

  • ವ್ಯಾಖ್ಯಾನಗಳು: ವರ್ಚುವಲ್ ಡಿಜಿಟಲ್ ಸ್ವತ್ತು ಎಂಬ ಪದವನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ವರ್ಚುವಲ್ ಡಿಜಿಟಲ್ ಸ್ವತ್ತು : ಸರಳ ಪದಗಳಲ್ಲಿ, ಕ್ರಿಪ್ಟೋ ಮತ್ತು ನಾನ್-ಫಂಗಬಲ್ ಟೋಕನ್ ಗಳನ್ನು(NFT) ಈಗ ನಿರ್ದಿಷ್ಟವಾಗಿ ವರ್ಚುವಲ್ ಡಿಜಿಟಲ್ ಸ್ವತ್ತುಗಳಾಗಿ ಗುರುತಿಸಬಹುದು!…” ಇದು ಯಾವುದೇ ಮಾಹಿತಿ ಅಥವಾ ಕೋಡ್ ಅಥವಾ ಸಂಖ್ಯೆ ಅಥವಾ ಟೋಕನ್( ಭಾರತೀಯ ಕರೆನ್ಸಿ ಅಥವಾ ವಿದೇಶಿ ಕರೆನ್ಸಿ ಅಲ್ಲ) , ಕ್ರಿಪ್ಟೋಗ್ರಾಫಿಕ್ ಅಥವಾ ಯಾವುದೇ ವಿಧಾನಗಳ ಮೂಲಕ ರಚಿಸಲಾಗಿದೆ, ಯಾವುದೇ ಹೆಸರಿನಿಂದ ಕರೆಯಬಹುದಾದ, ಮೌಲ್ಯ ವಿನಿಮಯದ ಡಿಜಿಟಲ್ ಪ್ರಾತಿನಿಧ್ಯವನ್ನು ಪರಿಗಣನೆಯೊಂದಿಗೆ ಅಥವಾ ಪರಿಗಣನೆಯಿಲ್ಲದೆ ಒದಗಿಸುತ್ತದೆ, ಭರವಸೆಯೊಂದಿಗೆ ಅಥವಾ ಪ್ರಾತಿನಿಧ್ಯದೊಂದಿಗೆ ಅಂತರ್ಗತ ಮೌಲ್ಯವನ್ನು, ಅಥವಾ ಯಾವುದೇ ಹಣಕಾಸಿನ ವಹಿವಾಟು ಅಥವಾ ಹೂಡಿಕೆಯಲ್ಲಿ ಮೌಲ್ಯದ ಗೂಡಾಗಿ ಅಥವಾ ಖಾತೆಯ ಘಟಕವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಹೂಡಿಕೆ ಯೋಜನೆಗೆ ಸೀಮಿತವಾಗಿಲ್ಲದೆ; ವಿದ್ಯುನ್ಮಾನವಾಗಿ ವರ್ಗಾಯಿಸಬಹುದು, ಸಂಗ್ರಹಿಸಬಹುದು ಅಥವಾ ವ್ಯಾಪಾರ ಮಾಡಬಹುದು……. .”
  • ವರ್ಗೀಕರಣ: ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56 ಅನ್ನು ‘ವರ್ಚುವಲ್ ಡಿಜಿಟಲ್ ಸ್ವತ್ತು’ ಸೇರಿಸಲು ಮರುವ್ಯಾಖ್ಯಾನಿಸಲಾಗಿದೆ. ಅಂದರೆ ಕ್ರಿಪ್ಟೋ ಅಥವಾ NFT ಯಂತಹ ವರ್ಚುವಲ್ ಡಿಜಿಟಲ್ ಸ್ವತ್ತನ್ನು ತೆರಿಗೆದಾರನು ಉಡುಗೊರೆಯಾಗಿ ಸ್ವೀಕರಿಸಿದರೆ, ಸ್ವೀಕರಿಸುವವರಿಗೆ(ತೆರಿಗೆದಾರನಿಗೆ) “ ಇತರ ಮೂಲಗಳಿಂದ  ಆದಾಯ” ಎಂಬ ಶೀರ್ಷಿಕೆಯ  ಅಡಿಯಲ್ಲಿ ತೆರಿಗೆ ವಿಧಿಸಲಾಗುತ್ತದೆ. ಉಡುಗೊರೆಗಳಿಗೆ ಸಂಬಂಧಿಸಿದ 50,000 cap ಎಲ್ಲಿಯೂ ಲಭ್ಯವಿರುತ್ತದೆ.
  • ತೆರಿಗೆ: ಸೆಕ್ಷನ್ ‘115BBH’ ಅನ್ನು ವರ್ಚುವಲ್ ಡಿಜಿಟಲ್ ಸ್ವತ್ತುಗಳಿಗೆ ತೆರಿಗೆ ವಿಧಿಸಲು ವಿನ್ಯಾಸಗೊಳಿಸಲಾಗಿದೆ. ಯಾವುದೇ ವರ್ಚುವಲ್ ಡಿಜಿಟಲ್ ಸ್ವತ್ತಿನ ವರ್ಗಾವಣೆಯಿಂದ ಗಳಿಸಿದ ಯಾವುದೇ ಆದಾಯದ ಮೇಲೆ, ತೆರಿಗೆದಾರರು 30% ದರದಲ್ಲಿ ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಇದರ  ಅರ್ಥ:
    • ವರ್ಚುವಲ್ ಡಿಜಿಟಲ್ ಸ್ವತ್ತಿನ ಮಾರಾಟದ ಬೆಲೆ ₹300 ಆಗಿದ್ದು, ಅದಕ್ಕನುಗುಣವಾದ ಖರೀದಿ ಬೆಲೆ ₹200 ಆಗಿದ್ದರೆ , ಪಾವತಿಸಬೇಕಾದ ತೆರಿಗೆಯ ಮೊತ್ತವನ್ನು ನಿವ್ವಳ ಆದಾಯದ ಮೇಲೆ ಲೆಕ್ಕ ಹಾಕಲಾಗುತ್ತದೆ.

 ಮಾರಾಟ ಬೆಲೆ: ₹300

(ಕಳೆಯುವುದು) ಖರೀದಿ ಬೆಲೆ: ₹200

 ನಿವ್ವಳ  ಆದಾಯ: ₹100

ಪಾವತಿಸಬೇಕಾದ ತೆರಿಗೆ: ₹30(₹100 * 30%)

  •  
    • ಆದಾಯದ ವಿರುದ್ದ ಯಾವುದೇ ವೆಚ್ಚವನ್ನು ಕ್ಲೇಮ್ ಮಾಡುವ ಆಗಿಲ್ಲ. ನಿವ್ವಳ ಆದಾಯವನ್ನು ತಲುಪಲು ಮಾರಾಟದ ಆದಾಯದಿಂದ ಸ್ವಾಧಿನದ ವೆಚ್ಚವನ್ನು (ಖರೀದಿ ಬೆಲೆ) ಮಾತ್ರ ಕಡಿತಗೊಳಿಸಬಹುದು.
    • ನಷ್ಟಗಳ ಸೆಟ್-ಆಫ್ ಮತ್ತು ಕ್ಯಾರಿ-ಫಾರ್ವರ್ಡ್ ಅನ್ನು ಅನುಮತಿಸಿರುವುದಿಲ್ಲ..
  • ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆ ಮೇಲಿನ ತೆರಿಗೆ:ವರ್ಚುವಲ್ ಡಿಜಿಟಲ್ ಸ್ವತ್ತುಗಳ ವರ್ಗಾವಣೆಗೆ ಸಂಬಂಧಿಸಿದ ಪ್ರತಿ ವಹಿವಾಟಿಗೆ, ಸೆಕ್ಷನ್ 194S ಅಡಿಯಲ್ಲಿ 1% ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಇಲ್ಲಿ (ಖರೀದಿದಾರ) ವರ್ಗಾವಣೆಗೆ ಪಾವತಿ ಮಾಡುವ ವ್ಯಕ್ತಿಯು ತೆರಿಗೆಯನ್ನು ಪಾವತಿಸುವ ಹೊಣೆಗಾರನಾಗಿರುತ್ತಾನೆ. ಆದಾಗ್ಯೂ ನೆನಪಿನಲ್ಲಿಡಬೇಕಾದ ಅಂಶಗಳು ಇಲ್ಲಿವೆ:
    • ಸೆಕ್ಷನ್ 194S ನಿಬಂಧನೆಗಳನ್ನು ಆಕರ್ಷಿಸಲು(ನಗದು ಅಥವಾ ರೀತಿಯ) ಪರಿಗಣನೆಯ ಅಗತ್ಯವಿದೆ.
    • ವರ್ಚುವಲ್ ಡಿಜಿಡಲ್ ಸ್ವತ್ತಿನ ಖರೀದಿದಾರರು ತೆರಿಗೆ ಲೆಕ್ಕ ಪರಿಶೋಧನೆಗೆ ಹೊಣೆಗಾರರಾಗಿಲ್ಲದಿದ್ದರೆ, ಅಥವಾ ವ್ಯಾಪಾರ ಮತ್ತು ವೃತ್ತಿಯಿಂದ ಆದಾಯವ್ನನು ಹೊಂದಿಲ್ಲದಿದ್ದರೆ(ಉದಾ: ಸಂಬಳ ಪಡೆಯುವ ವ್ಯಕ್ತಿಗಳು)- ಆರ್ಥಿಕ ವರ್ಷದ ಒಟ್ಟು ಮೌಲ್ಯದ ಪರಿಗಣನೆಯು ₹50,000(ಐವತ್ತು ಸಾವಿರ ರೂಪಾಯಿಗಳು) ಮೀರದಿದ್ದರೆ, 1% ತೆರಿಗೆ ಕಡಿತವು ಅನ್ವಯಿಸುವುದಿಲ್ಲ. ಆದಾಗ್ಯೂ ತೆರಿಗೆ ಲೆಕ್ಕ ಪರಿಶೋಧನೆಯು ಅನ್ವಯವಾಗಿದ್ದರೆ ಅಥವಾ ವ್ಯಾಪಾರ ಮತ್ತು ವೃತ್ತಿಯಿಂದ ಬರುವ ಆದಾಯವು ತೆರಿಗೆಗೊಳಪಡುವುದಾದರೆ, ₹50,000 ಮಿತಿಯನ್ನು ₹10,000 ಗಳಿಗೆ ಇಳಿಸಲಾಗುತ್ತದೆ.
    • ಫಾರ್ಮ್ ಗಳು, ಟೈಮ್ ಲೈನ್ ಗಳು ಮತ್ತು ತೆರಿಗೆ ಪಾವತಿಸುವ ಕಾರ್ಯವಿಧಾನಗಳನ್ನು ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ನಿರೀಕ್ಷಿಸಲಾಗಿದೆ.

ಕ್ರಿಪ್ಟೋ ತೆರಿಗೆ ಮೇಲಿನ ಈ ಸ್ಪಷ್ಟತೆಯು ಖಂಡಿತವಾಗಿಯೂ ಭಾರತದಲ್ಲಿ ಹೆಚ್ಚು ಅಗತ್ಯವಿರುವ ಕ್ರಿಪ್ಟೋ ಪರಿಸರ ವ್ಯವಸ್ಥೆಯನ್ನು ಗುರುತಿಸುವಿಕೆಯಲ್ಲಿ ಸಹಕರಿಸುತ್ತದೆ. ಈ ಬೆಳವಣಿಗೆಯು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವಿನ ಅಸ್ಪಷ್ಟತೆಯನ್ನು ತೆಗೆದುಹಾಕಿ, ಅದರಿಂದ ಕ್ರಿಪ್ಟೋ ಉದ್ಯಮಕ್ಕೆ ಅವುಗಳು ಹಣಕಾಸಿನ ಸೇವೆಗಳನ್ನು ಒದಗಿಸಬಹುದೆಂದು ನಾವು ಭಾವಿಸುತ್ತೇವೆ.ಇದು ಕೇವಲ ಪ್ರಾರಂಭಿಕವಾದರೂ, ಇನ್ನೂ ಹೆಚ್ಚಿನ ನಿರೀಕ್ಷೆಯನ್ನು ಧನಾತ್ಮಕವಾಗಿ ಎದುರು ನೋಡುತ್ತಿದ್ದೇವೆ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply