Skip to main content

ಮಾಸಿಕ ಪರಿಶೀಲನೆ – ಏಪ್ರಿಲ್ 2022 (Month in Review – April 2022)

By ಮೇ 2, 2022ಮೇ 27th, 20221 minute read
Month in Review - April 2022

ನಮಸ್ತೆ ಟ್ರೈಬ್! WazirXನಲ್ಲಿ ಏಪ್ರಿಲ್​ನಲ್ಲಿ ಏನೇನಾಯಿತು ಎಂಬುದರ ಮಾಸಿಕ ವರದಿ ಇಲ್ಲಿದೆ.

ಕಳೆದ ತಿಂಗಳು ಏನೇನಾಯಿತು?

[ಡನ್] 17 ಹೊಸ ಮಾರುಕಟ್ಟೆ ಪೇರ್​ಗಳು: ಕಳೆದ ತಿಂಗಳು ನಾವು USDT ಮಾರುಕಟ್ಟೆಗೆ 17 ಹಾಗೂ INR ಮಾರುಕಟ್ಟೆಗೆ 4 ಟೋಕನ್​ಗಳನ್ನು ಸೇರಿಸಿದ್ದೇವೆ! ನೀವಿಗ WazirXನ APE, OXT, OXT, WOO, KDA, MULTI, IDEX, ACA, JOE, MC, NAS, ALCX, HIGH, RNDR, PLA, FOR, GMT, and BNXಗಳ ಖರೀದಿ, ಮಾರಾಟ ಹಾಗೂ ವ್ಯಾಪಾರ ಮಾಡಬಹುದು. ನಿಮ್ಮ ನೆಚ್ಚಿನ ಪೇರ್​​ಗಳನ್ನು ಇಲ್ಲಿ ವ್ಯಾಪಾರ ಮಾಡಬಹುದು!

[ಡನ್] ಆ್ಯಪ್​ನಲ್ಲಿ ಪ್ರೈಸ್ ಅಲರ್ಟ್ ಫೀಚರ್: WazirX ನಲ್ಲಿ ನಾವು ಯಾವಾಗಲೂ ನಮ್ಮ ಬಳಕೆದಾರರು ಉತ್ತಮ ಶ್ರೇಣಿಯ ಅನುಭವ ಪಡೆಯಲಿ ಎಂಬ ಉದ್ದೇಶದಿಂದ ನಾವು ಕೆಲಸ ಮಾಡುತ್ತೇವೆ. ಹಾಗಾಗಿ, ಗ್ರಾಹಕರ ಅಗತ್ಯತೆಗಳು ಹಾಗೂ ಆದ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತೇವೆ. ಇದೇ ದಿಸೆಯಲ್ಲಿ ನಾವೀಗ ಹೊಸ ಫೀಚರ್ ಘೋಷಿಸಲು ಸಂತಸವಾಗುತ್ತದೆ. ಈಗ ನಮ್ಮೆಲ್ಲ ಗ್ರಾಹಕರು ಅವರ ಕಾಯಿನ್/ಟೋಕನ್​​ಗಳ ಕುರಿತು ಮಾಹಿತಿ ಪಡೆಯಲು WazirX ಆ್ಯಪ್​ನಲ್ಲಿಯೇ ‘ಪ್ರೈಸ್ ಅಲರ್ಟ್’ ಎಂಬ ಹೊಸ ಫೀಚರ್ ಅಳವಡಿಸಲಾಗಿದೆ! ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ನಾವೇನು ಬಿಲ್ಡ್ ಮಾಡುತ್ತಿದ್ದೇವೆ?

[ಆನ್​ಗೋಯಿಂಗ್] ಎಎಂಎಂ ಪ್ರೋಟೊಕಾಲ್: ನಮ್ಮ ಡಿಇಎಕ್ಸ್ ಅತಿ ಹೆಚ್ಚು ಅವಲಂಬಿತವಾಗಿರುವುದರಿಂದ ಕೆಲವು ಪ್ರೋಟೊಕಾಲ್​​ಗಳಲ್ಲಿ ಅನಿರೀಕ್ಷಿತ ವಿಳಂಬವಾಗುತ್ತಿದೆ. ಇದರಿಂದಾಗಿ ಲೈವ್ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ಸದ್ಯ ಇದು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ. ಆದರೆ, ಕ್ಷಿಪ್ರವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ತಂಡವು ಅವಿರತವಾಗಿ ಶ್ರಮಿಸುತ್ತಿದೆ.

[ಆನ್​​ಗೋಯಿಂಗ್] ಹೊಸ ಟೋಕನ್​ಗಳು: ಮುಂದಿನ ಕೆಲವೇ ವಾರಗಳಲ್ಲಿ ನಾವು WazirXನಲ್ಲಿ ಹೊಸ ಟೋಕನ್​ ಗಳನ್ನು ಲಿಸ್ಟ್ ಮಾಡುತ್ತೇವೆ. ನೀವೇನಾದರೂ ಸಲಹೆ ನೀಡಬೇಕೆ? @WazirXIndia ಮೂಲಕ ಟ್ವೀಟ್ ಮಾಡಿ.

ಕೆಲವು ಪ್ರಮುಖಾಂಶಗಳು

  • WazirX, Buidlers Tribe, & Atal Incubation Centre ಸಹಭಾಗಿತ್ವದಲ್ಲಿ ಗೋವಾದಲ್ಲಿ ಹೊಸ ವೆಬ್ 3 ಬ್ಲ್ಕಾಕ್ ಚೈನ್ ಪಾರ್ಕ್ ರಚಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಹೆಚ್ಚು ತಿಳಿಯಿರಿ.
  • ನಾವು ಜೀ ಬ್ಯುಸಿನೆಸ್ ಜತೆ ಸಹಭಾಗಿತ್ವ ಹೊಂದುವ ಹಾಗೂ ಆ ಮೂಲಕ ಸುದೀರ್ಘ ಸೇವೆ ಒದಗಿಸುವ ಚಿಂತನೆಯಲ್ಲಿದ್ದೇವೆ. 

ಒಟ್ಟಿನಲ್ಲಿ ಇದು ನಮಗೆ ಒಳ್ಳೆಯ ಹಾಗೂ ಫಲದಾಯಕ ತಿಂಗಳಾಗಿದೆ. ಹಾಗೆಯೇ, 2022ರ ಮೇನಲ್ಲಿಯೂ ಇದೇ ರೀತಿಯ ಸಾಕಷ್ಟು ಸಕಾರಾತ್ಮಕ ಸಾಧನೆ ಮಾಡುವ ಭರವಸೆ ಹೊಂದಿದ್ದೇವೆ. ಇದಕ್ಕಾಗಿ ನೀವು ಎಂದಿನಂತೆ ನಮಗೆ ಬೆಂಬಲ ನೀಡುತ್ತೀರಿ. 

ಜೈ ಹಿಂದ್!

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.
Nischal Shetty

Nischal Shetty is a leading Indian entrepreneur, Web3 builder, and one of the most influential voices in the crypto and blockchain ecosystem. He is best known as the founder of WazirX, India’s leading crypto exchange, and for consistently pushing innovation in blockchain-native products. He is building the future of crypto through Shardeum, his Layer-1 blockchain designed to help Indian startup builders take their products on-chain.

Leave a Reply