Skip to main content

ವಿವಿಧ ರೀತಿಯ ಕ್ರಿಪ್ಟೋ ವ್ಯಾಲೆಟ್ ಗಳು (Different Kinds of Crypto Wallets)

By ಏಪ್ರಿಲ್ 5, 2022ಜೂನ್ 3rd, 20225 minute read
Different Kinds of Crypto Wallets

ಕ್ರಿಪ್ಟೋಕರೆನ್ಸಿ ವಿಶ್ವಾದ್ಯಂತ ಮನ್ನಣೆಯನ್ನು ಪಡೆದುಕೊಂಡಿದೆ ಮತ್ತು ಅದರ ಜನಪ್ರಿಯತೆಯು ಹೆಚ್ಚುತ್ತಲೇ ಇದೆ. ಇದನ್ನು ಷೇರು ವಿನಿಮಯ ವ್ಯವಸ್ಥೆಯಂತೆಯೇ ಪರಿಗಣಿಸಲಾಗಿದೆ. ನಿಮ್ಮ ಕ್ರಿಪ್ಟೋಕರೆನ್ಸಿಗಳನ್ನು ನೀವು ಕ್ರಿಪ್ಟೋ ವಿನಿಮಯದಿಂದ ಹಿಂತೆಗೆದುಕೊಳ್ಳಬಹುದು ಮತ್ತು ಷೇರು ವಿನಿಮಯದಲ್ಲಿ ಷೇರು ಗಳೊಂದಿಗೆ ಮಾಡುವಂತೆ ಅವುಗಳನ್ನು ಬಾಹ್ಯ ವ್ಯಾಲೆಟ್ ನಲ್ಲಿ ಇರಿಸಬಹುದು.

ನಿಯಮಿತವಾಗಿ ಕ್ರಿಪ್ಟೋ ವಹಿವಾಟುಗಳೊಂದಿಗೆ ವ್ಯವಹರಿಸುವಾಗ ಕ್ರಿಪ್ಟೋ ವ್ಯಾಲೆಟ್ ಗಳ ವಿಧಗಳ ಬಗ್ಗೆ ತಿಳಿದುಕೊಳ್ಳುವುದು ಸಹ ಅತ್ಯಗತ್ಯ ಹಂತವಾಗಿದೆ. ಅತ್ಯುತ್ತಮ ಕ್ರಿಪ್ಟೋ ವ್ಯಾಲೆಟ್ ಗಳನ್ನು ಆಯ್ಕೆ ಮಾಡುವುದರಿಂದ ನಿಮ್ಮ ಕ್ರಿಪ್ಟೋಕರೆನ್ಸಿ ಪೋರ್ಟ್ ಫೋಲಿಯೊವನ್ನು ಸಂಗ್ರಹಿಸುವುದು ಮತ್ತು ನಿರ್ವಹಿಸುವುದು ಸುಲಭವಾಗುತ್ತದೆ (ಮತ್ತು ಬಹುಶಃ ಆನಂದದಾಯಕವೂ ಆಗಿರಬಹುದು).

ಈ ಲೇಖನದಲ್ಲಿ, ಲಭ್ಯವಿರುವ ವಿವಿಧ ರೀತಿಯ ಕ್ರಿಪ್ಟೋ ವ್ಯಾಲೆಟ್ ಗಳನ್ನು ಅವಲೋಕಿಸೋಣ.

ಕ್ರಿಪ್ಟೋ ವ್ಯಾಲೆಟ್ ಎಂದರೇನು?

“ವಿವಿಧ ರೀತಿಯ ಕ್ರಿಪ್ಟೋ ವ್ಯಾಲೆಟ್ ಗಳನ್ನು” ತಿಳಿದುಕೊಳ್ಳಲು ನೀವು ಉತ್ಸುಕರಾಗುವ ಮೊದಲು, ನೀವು ಮೊದಲನೆಯದಾಗಿ ಅವುಗಳನ್ನು ಅರ್ಥಮಾಡಿಕೊಳ್ಳಬೇಕು.

ಮೊಟ್ಟಮೊದಲನೆಯ ವಿಷಯ, ಕ್ರಿಪ್ಟೋಕರೆನ್ಸಿಯನ್ನು ಹೊಂದಿರುವುದು ಸಾಮಾನ್ಯ ಹಣವನ್ನು ಹೊಂದಿರುವುದಕ್ಕಿಂತ ಭಿನ್ನವಾಗಿದೆ. ಕ್ರಿಪ್ಟೋಕರೆನ್ಸಿ ಎಂಬುದು ಮೂರ್ತ ರೂಪದಲ್ಲಿ ಅಸ್ತಿತ್ವದಲ್ಲಿಲ್ಲದ ಮತ್ತು ಅನನ್ಯ ವಿಳಾಸಗಳೊಂದಿಗೆ ಬ್ಲಾಕ್ ಚೈನಿನಲ್ಲಿ ಇರುವ ಕೋಡ್ ಗಳ ಸಂಗ್ರಹವಾಗಿದೆ.

ಕ್ರಿಪ್ಟೋಕರೆನ್ಸಿಯ ವಹಿವಾಟುಗಳಲ್ಲಿ ಮತ್ತು ವ್ಯವಹಾರಗಳಲ್ಲಿ ನಿಮಗೆ ಸಹಾಯ ಮಾಡುವ ಖಾಸಗಿ ಮತ್ತು ಸಾರ್ವಜನಿಕ ಕೀಲಿಗಳು ಎಂಬ ಎರಡು ಕೀಲಿಗಳಿವೆ. ಕ್ರಿಪ್ಟೋ ಸ್ವತ್ತುಗಳನ್ನು ವರ್ಗಾಯಿಸುವಲ್ಲಿ ಇತರ ಬಳಕೆದಾರರಿಗೆ ಸಹಾಯ ಮಾಡಲು ಸಾರ್ವಜನಿಕ ಕೀಲಿಯನ್ನು ಬಳಸಲಾಗುತ್ತದೆ ಮತ್ತು ಏಕಕಾಲದಲ್ಲಿ ವ್ಯಾಲೆಟ್ ನಲ್ಲಿ ಅವುಗಳನ್ನು ಅನ್ ಲಾಕ್ ಮಾಡಲು  ಖಾಸಗಿ ಕೀಲಿಯನ್ನು  ಬಳಸಲಾಗುತ್ತದೆ.

ನಮೂನೆಯ ಮೇಲ್ಭಾಗ

ಮೊದಲು WazirX News  ಅನ್ನು ಪಡೆಯಿರಿ

ನಮೂನೆಯ ಕೆಳಭಾಗ

 ಕ್ರಿಪ್ಟೋ ವ್ಯಾಲೆಟ್ ಪ್ರಮಾಣಿತ ವ್ಯಾಲೆಟ್ ನಂತೆಯೇ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುತ್ತದೆ. ಮತ್ತೊಂದೆಡೆ, ವಿವಿಧ ಕ್ರಿಪ್ಟೋ ವ್ಯಾಲೆಟ್ ವಿಧಗಳು ಸಾಮಾನ್ಯ ವ್ಯಾಲೆಟ್ ಗಳಿಗಿಂತ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ. ವಾಸ್ತವದಲ್ಲಿ, ಕ್ರಿಪ್ಟೋ ವ್ಯಾಲೆಟ್ ಗಳು ಎಂದಿಗೂ ನಿಜವಾದ ನಾಣ್ಯವನ್ನು ಹೊಂದಿರುವುದಿಲ್ಲ; ಅವುಗಳು ಕ್ರಿಪ್ಟೋ-ಸ್ವತ್ತಿನ ಕೀಲಿಗಳ ಸುರಕ್ಷತೆಗೆ ಮಾತ್ರ ಭರವಸೆ ನೀಡುತ್ತವೆ. ವ್ಯಕ್ತಿಗಳನ್ನು ಹಣಕಾಸುಗಳಿಗೆ ಸಂಪರ್ಕಿಸುವ ಮತ್ತು ಅವರ ಸುರಕ್ಷತೆಯನ್ನು ಖಾತ್ರಿಪಡಿಸುವ ಮಾಹಿತಿಯನ್ನು ಕ್ರಿಪ್ಟೋ ವ್ಯಾಲೆಟ್ ನಲ್ಲಿ ಸಂಗ್ರಹಿಸಬಹುದು.

ಕ್ರಿಪ್ಟೋ ವ್ಯಾಲೆಟ್ ನಲ್ಲಿ ಸಾರ್ವಜನಿಕ ಮತ್ತು ಖಾಸಗಿ ಕೀಲಿಗಳ ಪ್ರಾಮುಖ್ಯತೆ

ನಾವು ಕ್ರಿಪ್ಟೋ ವ್ಯಾಲೆಟ್ ಗಳ ವಿಧಗಳ ಬಗ್ಗೆ ತಿಳಿದುಕೊಳ್ಳುವ ಮೊದಲು, ಖಾಸಗಿ ಮತ್ತು ಸಾರ್ವಜನಿಕ ಕೀಲಿಗಳು ಕ್ರಿಪ್ಟೋ ವ್ಯಾಲೆಟ್ ಗೆ ಹೇಗೆ ಸಂಬಂಧಿಸಿವೆ ಎಂಬುದನ್ನು ನೋಡೋಣ. ನೀವು ಕ್ರಿಪ್ಟೋ ವ್ಯಾಲೆಟ್ ಅನ್ನು ಹುಟ್ಟುಹಾಕಿದಾಗ, ನಿಮಗೆ ಖಾಸಗಿ ಕೀಲಿಯನ್ನು ಮತ್ತು ನಿಮ್ಮ ವ್ಯಾಲೆಟ್ ಗೆ ಲಿಂಕ್ ಮಾಡಲಾದ ಸಾರ್ವಜನಿಕ ಕೀಲಿಯನ್ನು ಒದಗಿಸಲಾಗುತ್ತದೆ. ಉದಾಹರಣೆಯಾಗಿ, ನಿಮ್ಮ ಇಮೇಲ್ ಅನ್ನು ಪರಿಗಣಿಸಿ. ನೀವು ಇಮೇಲ್ ಪಡೆಯಲು ಬಯಸುವ ಯಾರಿಗಾದರೂ ನಿಮ್ಮ ಇಮೇಲ್ ವಿಳಾಸವನ್ನು ನೀವು ಒದಗಿಸುತ್ತೀರಿ.

ಆದರೂ, ನಿಮ್ಮ ಇಮೇಲ್ ವಿಳಾಸವನ್ನು ಹಂಚಿಕೊಳ್ಳುತ್ತಿರುವುದು ನಿಮ್ಮ ಖಾತೆಯಿಂದ ಇಮೇಲ್ ಗಳನ್ನು ಕಳುಹಿಸಲು ಇತರರಿಗೆ ಅನುಮತಿಸಲಾಗುವುದು ಎಂಬುದನ್ನು ಸೂಚಿಸುವುದಿಲ್ಲ. ಹಾಗೆ ಮಾಡಲು ನಿಮ್ಮ ಇಮೇಲ್ ಖಾತೆಯ ಪಾಸ್ ವರ್ಡ್ ಅನ್ನು ಯಾರಾದರೂ ತಿಳಿದುಕೊಂಡಿರಬೇಕು. ಸಾರ್ವಜನಿಕ ಕೀಲಿಯನ್ನು ಮತ್ತು ಖಾಸಗಿ ಕೀಲಿಯನ್ನು ಕ್ರಿಪ್ಟೋ ವ್ಯಾಲೆಟ್ ಗಳಲ್ಲಿ ಇದೇ ರೀತಿಯಲ್ಲಿ ಬಳಸಲಾಗುತ್ತದೆ.

ಸಾರ್ವಜನಿಕ ಕೀಲಿಯು ಯಾರೊಂದಿಗಾದರೂ ಹಂಚಿಕೊಳ್ಳಬಹುದಾದ ಇಮೇಲ್ ವಿಳಾಸದಂತೆ ಕಾರ್ಯನಿರ್ವಹಿಸುತ್ತದೆ. ನಿಮ್ಮ ವ್ಯಾಲೆಟ್ ಯಾರಿಂದಲಾದರೂ ಹಣವನ್ನು ಸ್ವೀಕರಿಸುವಂತೆ ನೀವು ಮಾಡುವ ಸಮಯದಲ್ಲಿ ಇದನ್ನು ರಚಿಸಲಾಗಿದೆ.

ಖಾಸಗಿ ಕೀಲಿಯು ಸಂರಕ್ಷಿಸಲ್ಪಟ್ಟ ರಹಸ್ಯವಾಗಿದೆ. ಇದು ನಿಮ್ಮ ಪಾಸ್ ವರ್ಡ್ ಅನ್ನು ಹೋಲುತ್ತದೆ, ಇದನ್ನು ಹ್ಯಾಕ್ ಮಾಡಬಾರದು ಮತ್ತು ಯಾರೊಂದಿಗೂ ಹಂಚಿಕೊಳ್ಳಬಾರದು. ಈ ಖಾಸಗಿ ಕೀಲಿಯನ್ನು ಬಳಸಿಕೊಂಡು ನಿಮ್ಮ ಹಣವನ್ನು ನೀವು ಖರ್ಚು ಮಾಡುತ್ತೀರಿ. . ಯಾರಾದರೂ ನಿಮ್ಮ ಖಾಸಗಿ ಕೀಲಿಗೆ ಪ್ರವೇಶವನ್ನು ಪಡೆದರೆ, ನಿಮ್ಮ ಖಾತೆಯನ್ನು ಹ್ಯಾಕ್ ಮಾಡುವ ಉತ್ತಮ ಅವಕಾಶವಿರುತ್ತದೆ ಮತ್ತು ನಿಮ್ಮ ಎಲ್ಲಾ ಬಿಟ್ ಕಾಯಿನ್ ಠೇವಣಿಗಳನ್ನು ನೀವು ಕಳೆದುಕೊಳ್ಳುತ್ತೀರಿ.

ಕ್ರಿಪ್ಟೋ ವ್ಯಾಲೆಟ್ ನ ವೈಶಿಷ್ಟ್ಯಗಳು

ಕ್ರಿಪ್ಟೋ ವ್ಯಾಲೆಟ್ ನ ವೈಶಿಷ್ಟ್ಯಗಳ ತ್ವರಿತ ಅವಲೋಕನ ಇಲ್ಲಿದೆ:

  • ಬಳಸಲು ಸರಳ: ನೀವು ಪ್ರತಿದಿನ ಬಳಸುವ ಯಾವುದೇ ಇತರ ಸಾಫ್ಟ್ ವೇರ್ ಅಥವಾ ವ್ಯಾಲೆಟ್ ನಂತೆ ಇದು ಸರಳವಾಗಿ ಕಾರ್ಯನಿರ್ವಹಿಸುತ್ತದೆ.
  • ಅತ್ಯಂತ ಸುರಕ್ಷಿತ: ಇದು ಕೇವಲ ನಿಮ್ಮ ಖಾಸಗಿ ಕೀಲಿಯನ್ನು ಸುರಕ್ಷಿತವಾಗಿರಿಸುವ ವಿಷಯವಾಗಿದೆ.
  • ನೈಜ ಸಮಯದಲ್ಲಿ ಗಡಿಯಾಚೆಗಿನ ವಹಿವಾಟುಗಳಿಗೆ ಅನುಮತಿಸುತ್ತದೆ: ಇವು ಯಾವುದೇ ಮಧ್ಯವರ್ತಿಗಳಿಲ್ಲದೆ ತಡೆರಹಿತವಾಗಿರುತ್ತವೆ.
  • ಕಡಿಮೆ ವಹಿವಾಟು ವೆಚ್ಚ: ಸಾಮಾನ್ಯ ಬ್ಯಾಂಕ್ ಗಳಿಗೆ ಹೋಲಿಸಿದರೆ, ವಹಿವಾಟಿನ ವೆಚ್ಚವು ಗಮನಾರ್ಹವಾಗಿ ಕಡಿಮೆಯಿರುತ್ತದೆ.
  • ಹಲವಾರು ಕ್ರಿಪ್ಟೋಕರೆನ್ಸಿಗಳ ವಹಿವಾಟುಗಳನ್ನು ಅನುಮತಿಸುತ್ತದೆ: ಇದು ಕರೆನ್ಸಿಯ ಪರಿವರ್ತನೆಗಳನ್ನು ಸರಳಗೊಳಿಸುತ್ತದೆ.

ಕ್ರಿಪ್ಟೋ ವ್ಯಾಲೆಟ್ ನ ವಿವಿಧ ವಿಧಗಳು

 ಕ್ರಿಪ್ಟೋ ವ್ಯಾಲೆಟ್ ಗಳಲ್ಲಿ ತಮ್ಮದೇ ಆದ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ಹೊಂದಿರುವ ಎರಡು ವಿಧಗಳಿವೆ. ಅವುಗಳೆಂದರೆ:

  • ಹಾಟ್ ವ್ಯಾಲೆಟ್
  • ಕೋಲ್ಡ್ ವ್ಯಾಲೆಟ್

ಹಾಟ್ ವ್ಯಾಲೆಟ್ ಗಳು ಕೆಲವು ರೀತಿಯಲ್ಲಿ ಇಂಟರ್ನೆಟ್ ಗೆ ಸಂಪರ್ಕ ಹೊಂದಿರುವ ವ್ಯಾಲೆಟ್ ಗಳಾಗಿವೆ. ಮತ್ತೊಂದೆಡೆ, ಕೋಲ್ಡ್ ವ್ಯಾಲೆಟ್ ಗಳು ಭೌತಿಕ ವ್ಯಾಲೆಟ್ ಗಳಾಗಿದ್ದು ಅವು ಇಂಟರ್ನೆಟ್ ಗೆ ಸಂಪರ್ಕ ಹೊಂದಿಲ್ಲ.

ಹಾಟ್ ವ್ಯಾಲೆಟ್ ಗಳು ಕೋಲ್ಡ್ ವ್ಯಾಲೆಟ್ ಗಳಿಗಿಂತ ಹೆಚ್ಚು ನಮ್ಯತೆಯನ್ನು ಹೊಂದಿವೆ ಆದರೆ ಕಡಿಮೆ ಸುರಕ್ಷಿತವಾಗಿರುತ್ತವೆ. ಹಾಟ್ ವ್ಯಾಲೆಟ್ ಗಳು ಡಿಜಿಟಲ್ ಆಗಿರುವುದರಿಂದ, ಚಲಿಸುತ್ತಿರುವಾಗ ನಿಮ್ಮ ಹಣವನ್ನು ಪ್ರವೇಶಿಸಲು ಇದು ನಿಮಗೆ ಅನುಮತಿಸುತ್ತದೆ. ಮತ್ತೊಂದೆಡೆ, ಡಿಜಿಟಲ್ ಆಗಿರುವುದರಿಂದ ಅವು ಏನೇ ಆದರೂ ದುರ್ಬಲವಾಗಿವೆ.

ಕೋಲ್ಡ್ ವ್ಯಾಲೆಟ್ ಗಳು ಇಂಟರ್ನೆಟ್ ಗೆ ಸಂಪರ್ಕ ಹೊಂದಿಲ್ಲದ ಕಾರಣ, ಅವು ಸಾಮಾನ್ಯವಾಗಿ ಹೆಚ್ಚು ಸುರಕ್ಷಿತವಾಗಿರುತ್ತವೆ. ಕೋಲ್ಡ್ ವ್ಯಾಲೆಟ್ ನಿಂದ ಹಣವನ್ನು ಕಳೆದುಕೊಳ್ಳಲು, ಅದನ್ನು ಭೌತಿಕವಾಗಿ ತೆಗೆದುಕೊಳ್ಳಬೇಕಾಗುತ್ತದೆ. ಆದರೂ, ಈ ಮಟ್ಟದ ರಕ್ಷಣೆಯು ಪ್ರಯಾಣ ಮಾಡುವಾಗ ನಗದು ವಿನಿಮಯವನ್ನು ಹೆಚ್ಚು ಸವಾಲಾಗಿ ಮಾಡುತ್ತದೆ.

ಸಾಕಷ್ಟು ಬಿಟ್ ಕಾಯಿನ್ ಹೊಂದಿರುವವರಿಗೆ ಕೋಲ್ಡ್  ಮತ್ತು ಹಾಟ್ ವ್ಯಾಲೆಟ್ ಗಳ ಮಿಶ್ರಣವು ಅತ್ಯುತ್ತಮ ಆಯ್ಕೆಯಾಗಿದೆ. ಕೋಲ್ಡ್ ವ್ಯಾಲೆಟ್ ಹೆಚ್ಚಿನ ಸ್ವತ್ತುಗಳನ್ನು ರಕ್ಷಿಸುತ್ತದೆ, ಆದರೆ ಹಾಟ್ ವ್ಯಾಲೆಟ್ ಹೆಚ್ಚು ನಮ್ಯತೆಯನ್ನು ಒದಗಿಸುತ್ತದೆ.

ಹೈಬ್ರಿಡ್ ಕಾರ್ಯತಂತ್ರವು ನಿಮಗೆ ಎರಡೂ ಲೋಕಗಳಲ್ಲಿ ಅತ್ಯುತ್ತಮವಾದದ್ದನ್ನು ನೀಡುತ್ತದೆ: ಭದ್ರತೆ ಮತ್ತು ನಮ್ಯತೆ. ಉದಾಹರಣೆಗೆ: ನಿರ್ದಿಷ್ಟ ರೀತಿಯ ಹಾಟ್ ಅಥವಾ ಕೋಲ್ಡ್ ವ್ಯಾಲೆಟ್ ಅನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಭದ್ರತೆಯನ್ನು ನೀವು ಉತ್ತಮವಾಗಿ ಕಸ್ಟಮೈಸ್ ಮಾಡಬಹುದು.

ಹಾಟ್ ಮತ್ತು ಕೋಲ್ಡ್ ವ್ಯಾಲೆಟ್ ಎರಡೂ ವಿಭಾಗಗಳು ವಿಭಿನ್ನ ರೀತಿಯ ಕ್ರಿಪ್ಟೋ ವ್ಯಾಲೆಟ್ ಗಳನ್ನು ಹೊಂದಿವೆ. ಆದರೂ, ನಾವು ಮೂರು ಪ್ರಾಥಮಿಕ ವಿಧಗಳನ್ನು ಹೊಂದಿದ್ದೇವೆ:

  • ಸಾಫ್ಟ್ ವೇರ್ ವ್ಯಾಲೆಟ್ ಗಳು,
  • ಹಾಟ್ ವ್ಯಾಲೆಟ್ ಗಳು ಮತ್ತು
  • ಪೇಪರ್  ವ್ಯಾಲೆಟ್ ಗಳು.

ಸಾಫ್ಟ್ ವೇರ್ ವ್ಯಾಲೆಟ್ ಗಳು

ಅವು ಇಂಟರ್ನೆಟ್ ಗೆ ಸಂಪರ್ಕ ಹೊಂದಿರುವುದರಿಂದ, ಹೆಚ್ಚಿನ ಸಾಫ್ಟ್ ವೇರ್ ವ್ಯಾಲೆಟ್ ಗಳನ್ನು ಹಾಟ್ ವ್ಯಾಲೆಟ್ ಗಳು ಎಂದು ವರ್ಗೀಕರಿಸಲಾಗಿದೆ. ವೆಬ್ ವ್ಯಾಲೆಟ್ ಗಳು, ಡೆಸ್ಕ್ ಟಾಪ್ ವ್ಯಾಲೆಟ್ ಗಳು ಮತ್ತು ಮೊಬೈಲ್ ವ್ಯಾಲೆಟ್ ಗಳು ಸಾಫ್ಟ್ ವೇರ್ ವ್ಯಾಲೆಟ್ ಗಳ ಮೂರು ಅತ್ಯಂತ ಪ್ರಚಲಿತ ನಮೂನೆಗಳಾಗಿವೆ.

1. ವೆಬ್ ವ್ಯಾಲೆಟ್ ಗಳು: 

ವೆಬ್ ವ್ಯಾಲೆಟ್ ಗಳನ್ನು ಪ್ರವೇಶಿಸಲು ವೆಬ್ ಬ್ರೌಸರ್ ಅನ್ನು ಬಳಸಲಾಗುತ್ತದೆ. ಆದ್ದರಿಂದ ನೀವು ಯಾವುದೇ ವಿಶೇಷ ಸಾಫ್ಟ್ ವೇರ್ ಅನ್ನು ನಿಮ್ಮ ಕಂಪ್ಯೂಟರ್ ಅಥವಾ ಫೋನ್ ನಲ್ಲಿ ಡೌನ್ ಲೋಡ್ ಮಾಡುವ ಅಗತ್ಯವಿಲ್ಲ ಏಕೆಂದರೆ ನೀವು ಅವುಗಳನ್ನು ಬ್ರೌಸರ್ ಮೂಲಕ ಪ್ರವೇಶಿಸಬಹುದು.

ಬ್ರೌಸರ್ ಪ್ರವೇಶ ಎಂದರೆ ನಿಮ್ಮ ಪಾಸ್ ವರ್ಡ್ ಮತ್ತು ವೆಬ್ ಬ್ರೌಸರ್  ಇರುವ ಸಾಧನವನ್ನು ಹೊಂದಿರುವವರೆಗೆ ನೀವು ಎಲ್ಲಿಂದಲಾದರೂ ನಿಮ್ಮ ಕ್ರಿಪ್ಟೋವನ್ನು ನಿರ್ವಹಿಸಬಹುದು.

ಆದರೂ, ವೆಬ್ ಸೈಟ್ ಆಗಾಗ್ಗೆ ವೆಬ್ ವ್ಯಾಲೆಟ್ ನೊಂದಿಗೆ ನಿಮ್ಮ ಕ್ರಿಪ್ಟೋ ಕೀಲಿಯನ್ನು ಹೊಂದಿರುತ್ತದೆ. ಆದ್ದರಿಂದ ನೀವು ಈ ಕಾರಣದಿಂದಾಗಿ ನಿಮ್ಮ ಕ್ರಿಪ್ಟೋಕರೆನ್ಸಿಗಳ ಮೇಲೆ ಸ್ವಲ್ಪ ಕಡಿಮೆ ನಿಯಂತ್ರಣವನ್ನು ಹೊಂದಿರುತ್ತೀರಿ.

2. ಡೆಸ್ಕ್ ಟಾಪ್ ವ್ಯಾಲೆಟ್ ಗಳು:

ಡೆಸ್ಕ್ ಟಾಪ್ ವ್ಯಾಲೆಟ್ ನಿಮ್ಮ ಕಂಪ್ಯೂಟರ್ ನಲ್ಲಿ ಪ್ರೋಗ್ರಾಂ ಅನ್ನು ಸ್ಥಾಪಿಸುವುದನ್ನು ಅಗತ್ಯವಾಗಿಸುತ್ತದೆ. ನಂತರ, ನಿಮ್ಮ ಕೀಲಿಗಳನ್ನು ಸಂಗ್ರಹಿಸಲು ಪ್ರೋಗ್ರಾಂ ಅನ್ನು ಬಳಸಿಕೊಂಡು ನೀವು ದತ್ತಾಂಶ ಕಡತವನ್ನುರಚಿಸುತ್ತೀರಿ. ಅಂತಿಮವಾಗಿ, ಕೀಲಿಗಳಿಗೆ ಪ್ರವೇಶವನ್ನು ಪಡೆಯಲು, ನೀವು ಪಾಸ್ ವರ್ಡ್  ಅನ್ನು ಸ್ಥಾಪಿಸುವ ಅಗತ್ಯವಿದೆ.

ಡೆಸ್ಕ್ ಟಾಪ್ ವ್ಯಾಲೆಟ್ ಅನ್ನು ಬಳಸುವುದರ ಪ್ರಯೋಜನವೆಂದರೆ ನಿಮ್ಮ ಕೀಲಿಯ ಮೇಲೆ ನೀವು ನಿಯಂತ್ರಣವನ್ನು ಹೊಂದಿರುತ್ತೀರಿ. ಆದರೂ, ನಿಮ್ಮ ಕೀಲಿಯನ್ನು ನೀವು ಹೊಂದಿರುವ ಕಾರಣ ನಿಮ್ಮ ಕಂಪ್ಯೂಟರ್ ವೈರಸ್ ಗಳು ಮತ್ತು ಮಾಲ್ ವೇರ್ ಗಳಿಂದ ಸ್ವಚ್ಛವಾಗಿದೆ ಎಂದು ಖಾತರಿಪಡಿಸುವುದು ಉತ್ತಮವಾಗಿದೆ. ನಿಮ್ಮ ಪಾಸ್ ವರ್ಡ್ ಅನ್ನು ಮರೆಯದಿರುವುದು ಸಹ ಮುಖ್ಯವಾಗಿದೆ.

ನೀವು ಡೆಸ್ಕ್ ಟಾಪ್ ವ್ಯಾಲೆಟ್ ಅನ್ನು ಆಯ್ಕೆ ಮಾಡಿದರೆ, ದತ್ತಾಂಶ ಕಡತವನ್ನು ನಕಲು ಮಾಡಿ ಮತ್ತು ಅದನ್ನು ಬೇರೆಡೆ ಉಳಿಸಿ. ನಂತರ, ನೀವು ನಿಮ್ಮ ಕಂಪ್ಯೂಟರ್ ನಿಂದ ದೂರವಿದ್ದರೂ ಅಥವಾ ಅದು ಕ್ರ್ಯಾಶ್ ಆಗಿದ್ದರೂ ನಿಮ್ಮ ಹಣವನ್ನು ಪ್ರವೇಶಿಸಲು ನಿಮಗೆ ಸಾಧ್ಯವಾಗುತ್ತದೆ.

3. ಮೊಬೈಲ್ ವ್ಯಾಲೆಟ್ ಗಳು:

ಮೊಬೈಲ್ ವ್ಯಾಲೆಟ್ ಗಳು ಡೆಸ್ಕ್ ಟಾಪ್ ವ್ಯಾಲೆಟ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಪ್ರಮುಖ ವ್ಯತ್ಯಾಸವೆಂದರೆ ವಾಲೆಟ್ ಸ್ಮಾರ್ಟ್ ಫೋನ್ ಅಪ್ಲಿಕೇಶನ್ ಆಗಿದೆ.

ನೀವು ಹಣವನ್ನು ವ್ಯಾಪಾರ ಮಾಡಲು ಬಯಸಿದಾಗ ನೀವು ಎಲ್ಲಿಗೆ ಹೋಗಬಹುದು ಎಂಬುದಕ್ಕೆ ಮೊಬೈಲ್ ವ್ಯಾಲೆಟ್ ಹೆಚ್ಚುವರಿ ಸ್ವಾತಂತ್ರ್ಯವನ್ನು ನೀಡುತ್ತದೆ. ಅವರು ನಿಮಗೆ ಕ್ಯೂಆರ್  ಕೋಡ್ ಗಳ ಸೌಲಭ್ಯವನ್ನು ಒದಗಿಸುತ್ತಾರೆ ಅದು ನಿಮಗೆ ಕ್ರಿಪ್ಟೋಕರೆನ್ಸಿಯನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸುಲಭಗೊಳಿಸುತ್ತದೆ.

ಮೊಬೈಲ್ ವ್ಯಾಲೆಟ್ ಗಳು ಹೆಚ್ಚಿನ ಸ್ವಾತಂತ್ರ್ಯವನ್ನು ಒದಗಿಸುತ್ತವೆ, ಆದರೆ ಅವುಗಳಿಗೆ ಹೆಚ್ಚುವರಿ ಭದ್ರತಾ ಕ್ರಮಗಳೂ ಅಗತ್ಯವಿರುತ್ತವೆ. ಉದಾಹರಣೆಗೆ: ನಿಮ್ಮ ಕ್ರಿಪ್ಟೋಕರೆನ್ಸಿಯನ್ನು ಸುರಕ್ಷಿತವಾಗಿರಿಸಲು ಮೊಬೈಲ್ ವ್ಯಾಲೆಟ್ ಗಳು ವೈರಸ್-ಮುಕ್ತವಾಗಿರಬೇಕು. ಇದಲ್ಲದೆ, ನಿಮ್ಮ ಫೋನ್ ಅನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ನೀವು ಹೆಚ್ಚಿನ ಜಾಗರೂಕತೆಯನ್ನು ತೋರಿದರೆ ಸಹಾಯವಾಗುತ್ತದೆ.

ಹಾರ್ಡ್ ವೇರ್ ವ್ಯಾಲೆಟ್ ಗಳು

ನಿಮ್ಮ ಕೀಲಿಗಳನ್ನು ಹಾರ್ಡ್ ವೇರ್ ವ್ಯಾಲೆಟ್ ಅನ್ನು ಬಳಸುವ ಸಾಫ್ಟ್ ವೇರ್ ನಲ್ಲಿ  ಸಂಗ್ರಹಿಸುವುದಕ್ಕಿಂತ ಹೆಚ್ಚಾಗಿ ಭೌತಿಕ ಸಾಧನದಲ್ಲಿ ಸಂಗ್ರಹಿಸಲಾಗುತ್ತದೆ. ಬಹುಪಾಲು ಹಾರ್ಡ್ ವೇರ್ ವ್ಯಾಲೆಟ್ ಗಳು ಫ್ಲ್ಯಾಷ್ ಡ್ರೈವ್ ನಂತೆಯೇ ಕಾರ್ಯನಿರ್ವಹಿಸುತ್ತವೆ. ಯುಎಸ್ ಬಿ ಡ್ರೈವ್ ಅವುಗಳನ್ನು ಕಂಪ್ಯೂಟರ್ ಅಥವಾ ಇತರ ಸಾಧನಕ್ಕೆ ಸಂಪರ್ಕಿಸಬಹುದು.

ಇದು ಹಾರ್ಡ್ ವೇರ್ ವ್ಯಾಲೆಟ್ ನ ಅತ್ಯಂತ ಗಮನಾರ್ಹ ಪ್ರಯೋಜನವಾಗಿದೆ. ಇದು ಇಂಟರ್ನೆಟ್ ಗೆ ಸಂಪರ್ಕಗೊಂಡಿಲ್ಲ, ಇದು ಗಣನೀಯ ಭದ್ರತಾ ಅಪಾಯವನ್ನು ತೆಗೆದುಹಾಕುತ್ತದೆ. ನಿಮ್ಮ ಸಾಧನವನ್ನು ನೀವು ಕಳೆದುಕೊಂಡರೆ ನಿಮ್ಮ ಕ್ರಿಪ್ಟೋವನ್ನು ಪ್ರವೇಶಿಸಲು ನಿಮಗೆ ಅನುಮತಿಸುವುದಕ್ಕಾಗಿ ನೀವು ಹಾರ್ಡ್ ವೇರ್ ವ್ಯಾಲೆಟ್ ಅನ್ನು ಬಳಸಿಕೊಂಡು ಸರಣಿ ಪದಗುಚ್ಛವನ್ನು ಸ್ಥಾಪಿಸುತ್ತೀರಿ.

ವಹಿವಾಟುಗಳನ್ನು ರಚಿಸುವಾಗ ನಿಮ್ಮ ಖಾಸಗಿ ಕೀಲಿ ಎಂದಿಗೂ ನಿಮ್ಮ ಸಾಧನವನ್ನು ತೊರೆಯುವುದಿಲ್ಲ.  ಗ್ಯಾಜೆಟ್ ವಹಿವಾಟು/ ಪಾವತಿ ಮಾಹಿತಿಯನ್ನು ಕೇಳುತ್ತದೆ ಮತ್ತು ನಂತರ ದತ್ತಾಂಶವನ್ನು ಪರಿಶೀಲಿಸುತ್ತದೆ. ಆದ್ದರಿಂದ, ನಿಮ್ಮ ಖಾಸಗಿ ಕೀಲಿಯು ಈ ರೀತಿಯಾಗಿ ಸಾಧನವನ್ನು ತೊರೆಯುವುದಿಲ್ಲ.

ಸಾಫ್ಟ್ ವೇರ್ ವ್ಯಾಲೆಟ್ ಗಳಿಗೆ ಹೋಲಿಸಿದರೆ, ಹಾರ್ಡ್ ವೇರ್ ವ್ಯಾಲೆಟ್ ಗಳು ಹೆಚ್ಚು ಸುರಕ್ಷಿತವಾಗಿರುತ್ತವೆ. ಮತ್ತು ನಿಸ್ಸಂದೇಹವಾಗಿ, ಅವು ಹೆಚ್ಚು ದುಬಾರಿಯಾಗಿವೆ. ಆದ್ದರಿಂದ, ಗಣನೀಯ ಪ್ರಮಾಣದ ಕ್ರಿಪ್ಟೋಕರೆನ್ಸಿ ಹೊಂದಿರುವ ಅಥವಾ ತಮ್ಮ ಸ್ವತ್ತುಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಳ್ಳಲು ಯೋಜಿಸುವ ಜನರಿಗೆ ಅವುಗಳನ್ನು ಹೆಚ್ಚು ಸೂಚಿಸಲಾಗುತ್ತದೆ.

ಪೇಪರ್ ವ್ಯಾಲೆಟ್ ಗಳು

ಪೇಪರ್ ವ್ಯಾಲೆಟ್ ಎಂಬುದು ಒಂದು ರೀತಿಯ ಕೋಲ್ಡ್ ವ್ಯಾಲೆಟ್ ಆಗಿದ್ದು, ಇದನ್ನು ಕಾಗದದ ಹಾಳೆಯಿಂದ ಮಾಡಲಾಗಿದೆ. ನಿಮ್ಮ ಬಿಟ್ ಕಾಯಿನ್ ಪಡೆಯಲು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪೇಪರ್ ಹೊಂದಿದೆ.

ಕೋಲ್ಡ್ ವ್ಯಾಲೆಟ್ ಗಳು ಹೆಚ್ಚು ವಿಶ್ವಾಸಾರ್ಹವಾಗಿದ್ದರೂ, ಪೇಪರ್ ವ್ಯಾಲೆಟ್ ನ ಸ್ವಭಾವವು ಅದನ್ನು ದುರ್ಬಲಗೊಳಿಸುತ್ತದೆ. ಒಂದು ವೇಳೆ, ನಿಮ್ಮ ಪೇಪರ್ ವ್ಯಾಲೆಟ್ ಅನ್ನು ನೀವು ಕಳೆದುಕೊಂಡರೆ, ನಿಮ್ಮ ಹಣವನ್ನು ಸಹ ನೀವು ಕಳೆದುಕೊಳ್ಳುತ್ತೀರಿ.  

ಪೇಪರ್ ವ್ಯಾಲೆಟ್ ನ ಮತ್ತೊಂದು ನ್ಯೂನತೆಯೆಂದರೆ ಭಾಗಶಃ ಹಣವನ್ನು ರವಾನಿಸಲು ಅಸಮರ್ಥತೆ. ಪರ್ಯಾಯಗಳು ಅಸ್ತಿತ್ವದಲ್ಲಿವೆ, ಆದರೆ ಅವು ಸಮಯವನ್ನು ತೆಗೆದುಕೊಳ್ಳುತ್ತವೆ. ಈ ನ್ಯೂನತೆಗಳಿಂದಾಗಿ ಪೇಪರ್ ವ್ಯಾಲೆಟ್ ಗಳು ಸಾಮಾನ್ಯವಾಗಿ ಅಸಮಾಧಾನಕರವಾಗಿರುತ್ತವೆ.

ಕೆಳಗಿನ ಸಾಲು

ನೀವು ಬಿಟ್ ಕಾಯಿನ್ ಮತ್ತು ಇತರ ಕ್ರಿಪ್ಟೋಕರೆನ್ಸಿಗಳೊಂದಿಗೆ ವ್ಯವಹರಿಸುವಾಗ ಕ್ರಿಪ್ಟೋ ವ್ಯಾಲೆಟ್ ಗಳು ನಿರ್ಣಾಯಕ ಭಾಗವಾಗಿರುತ್ತವೆ. ಏಕೆಂದರೆ ಅವು ಬ್ಲಾಕ್ ಚೈನ್ ನೆಟ್ ವರ್ಕ್ ಗಳಿಗೆ ಹಣವನ್ನು ವರ್ಗಾಯಿಸಲು ಮತ್ತು ಸ್ವೀಕರಿಸಲು ಅನುವು ಮಾಡಿಕೊಡುವ ಮೂಲಸೌಕರ್ಯಗಳ ಅತ್ಯಗತ್ಯ ತುಣುಕುಗಳ ಭಾಗಗಳಲ್ಲಿ ಒಂದಾಗಿವೆ. ಆದರೂ, ಪ್ರತಿಯೊಂದು ವಾಲೆಟ್ ವಿಧವು ಅದರ ಪ್ರಯೋಜನಗಳು ಮತ್ತು ನ್ಯೂನತೆಗಳನ್ನು ಹೊಂದಿದೆ, ಆದ್ದರಿಂದ ಹಣವನ್ನು ಚಲಾವಣೆ ಮಾಡುವ ಮೊದಲು ಅವು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ನಿರ್ಣಾಯಕವಾಗಿದೆ.

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply