Skip to main content

ತಪ್ಪಿಸಬೇಕಾದ ಕೆಟ್ಟ ಕ್ರಿಪ್ಟೋ ಸಲಹೆ (The Worst Crypto Advice to Avoid)

By ಏಪ್ರಿಲ್ 14, 2022ಏಪ್ರಿಲ್ 19th, 20223 minute read

ನೀವು ಆರಂಭಿಗರಾಗಿರಲಿ ಅಥವಾ ಕ್ರಿಪ್ಟೋ ಪ್ರಪಂಚದ ಅನುಭವಿಯಾಗಿರಲಿ, ನೀವು ಒಂದಲ್ಲಾ ಒಂದು ಸಮಯದಲ್ಲಿ ಕೆಲವು ನಷ್ಟಗಳನ್ನು ಹೊಂದಿರುತ್ತೀರಿ. ಇದು ಕಲಿಕೆಯ ಪ್ರಕ್ರಿಯೆಯ ಭಾಗವಾಗಿದೆ, ಆದರೆ ಮಹತ್ವವಾದ ನಷ್ಟವನ್ನು ಅನುಭವಿಸದೆ ನೀವು ಕಲಿಯಬಹುದಾದರೆ ಹೇಗಿರುತ್ತದೆ? ಕ್ರಿಪ್ಟೋಕರೆನ್ಸಿ ಮತ್ತು ಇತರ ಬ್ಲಾಕ್‌ಚೈನ್ ಸ್ವತ್ತುಗಳನ್ನು ಟ್ರೇಡಿಂಗ್ ಮಾಡುವಾಗ ಏನು ಮಾಡಬಾರದು ಎಂಬುದಕ್ಕೆ ಉದಾಹರಣೆಯಾಗಿ ಕ್ರಿಪ್ಟೋದಲ್ಲಿನ ಕೆಲವು ಕೆಟ್ಟ ಸಲಹೆಗಳನ್ನು ನೋಡೋಣ.

ಅಗ್ರಸ್ಥಾನದಲ್ಲಿರುವುದನ್ನು ಖರೀದಿಸಿ

ಅಗ್ರಸ್ಥಾನದಲ್ಲಿರುವುದನ್ನು ಖರೀದಿಸುವುದು ಅಥವಾ ಕಾಯಿನ್ ಅನ್ನು ATH (ಸಾರ್ವಕಾಲಿಕವಾಗಿ ಗರಿಷ್ಟದಲ್ಲಿರುವ) ನಲ್ಲಿದ್ದಾಗ ಖರೀದಿಸುವುದು ಒಂದು ಅತ್ಯುತ್ಕೃಷ್ಟ ತಪ್ಪು, ನಷ್ಟಕ್ಕೆ ಖಚಿತವಾಗಿ ಕಾರಣವಾಗುತ್ತದೆ. ನೀವು ಬೆಲೆಗಳ ಪಂಪ್ ಅನ್ನು ವೀಕ್ಷಿಸಿದರೆ ಮತ್ತು FOMO (ಕಳೆದುಹೋಗುವ ಭಯ) ಅನುಭವಿಸಿದರೆ ಅಥವಾ ಇತರರಿಂದ ನೀವು ಮನವರಿಕೆ ಮಾಡಿದರೆ – ಬಹುಶಃ ಈಗಾಗಲೇ ಕಾಯಿನ್ ಅನ್ನು ಹೊಂದಿರುವವರು- ಖರೀದಿಸಲು ಸಹ ಇದು ಸಂಭವಿಸಬಹುದು. ಬೆಲೆ ಕುಸಿತಗೊಂಡಾಗ, ನಿಮ್ಮ ನಷ್ಟಗಳು 30 ರಿಂದ 40% ರಷ್ಟು ಸುಲಭವಾಗಿ ತಲುಪಬಹುದು, ಒಂದು ವೇಳೆ ಹೆಚ್ಚಾಗದಿದ್ದರೆ. ಖಚಿತವಾಗಿ, ಅಗ್ರಸ್ಥಾನ ಯಾವುದು ಎಂದು ನಿಮಗೆ ತಿಳಿದಿಲ್ಲದಿರಬಹುದು, ಆದರೆ ಯಾವುದೇ ಸಮರ್ಥ ಹೂಡಿಕೆ ಸಲಹೆಯು ಹಣವನ್ನು ಮಾಡಲು ಪ್ರಯತ್ನಿಸುವುದಕ್ಕಿಂತ ನಿಮ್ಮ ಹಣವನ್ನು ಕಳೆದುಕೊಳ್ಳದಂತೆ ಆದ್ಯತೆ ನೀಡುತ್ತದೆ.

ಈ ತಪ್ಪಿನಿಂದ ಚೇತರಿಸಿಕೊಳ್ಳಲು, ನೀವು ಮಾಡಬಹುದಾದ ಕೆಲವು ವಿಷಯಗಳಿವೆ:

  •  WazirX ನಂತಹ ಎಕ್ಸ್‌ಚೇಂಜ್‌ನಲ್ಲಿ ಕಾಯಿನ್‌ ಹಣಕಾಸಿನ ಚಾರ್ಟ್‌ಗಳನ್ನು ತೆರೆಯಿರಿ, 
  • ಪ್ರಸ್ತುತ ಪಂಪ್ ಸಮರ್ಥನೀಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿ. ಬೆಲೆ ಕರ್ವ್ ಪ್ಯಾರಾಬೋಲಿಕ್ ಆಕಾರದಲ್ಲಿದ್ದರೆ, ಬೆಳವಣಿಗೆಯು ಸ್ವಾಭಾವಿಕವಾಗಿರಲು ಕಡಿಮೆ ಅವಕಾಶವಿರುತ್ತದೆ ಮತ್ತು ಕಾಯಿನ್ ಮತ್ತೆ ATH ಅನ್ನು ತಲುಪುವ ಸಾಧ್ಯತೆಯಿಲ್ಲ. 

ರೇಖೀಯವಾಗಿ ಬೆಲೆಯ ಬೆಳವಣಿಗೆಯ ಸಂದರ್ಭದಲ್ಲಿ, ನಿಮ್ಮ ನಷ್ಟವನ್ನು ಕಡಿಮೆ ಮಾಡುವ ಭರವಸೆ ಇನ್ನೂ ಇರಬಹುದು ಮತ್ತು ಬಹುಶಃ ಲಾಭವನ್ನು ಗಳಿಸಬಹುದು. ನೀವು ಮಾಡಬೇಕಾಗಿರುವುದೇನೆಂದರೆ ಮಾರಾಟ ಮಾಡಲು ಸ್ವೀಕಾರಾರ್ಹ ಬೆಲೆಯನ್ನು ಕಂಡುಕೊಳ್ಳುವವರೆಗೆ ನೀವು ಚಾರ್ಟ್‌ಗಳನ್ನು ನಿರೀಕ್ಷಿಸುವುದು ಮತ್ತು ಪರಿಶೀಲಿಸುವುದು.

ಸಹಜವಾಗಿ, ಇದೆಲ್ಲವೂ ಸರಳೀಕೃತವಾಗಿದೆ. ಚಾರ್ಟ್‌ಗಳನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳಲು, ನೀವು  WazirX blog ಗೆ ಹೋಗಬೇಕಾಗಬಹುದು ಮತ್ತು ಕ್ರಿಪ್ಟೋದಲ್ಲಿನ ತಾಂತ್ರಿಕ ವಿಶ್ಲೇಷಣೆಯ ಸುತ್ತ ಅದರ ಪೋಸ್ಟ್‌ಗಳನ್ನು ಓದಬೇಕು.

via WazirX

ಮೈಕ್ರೋ ಕ್ಯಾಪ್ ಕಾಯಿನ್‌ಗಳನ್ನು ಖರೀದಿಸುವುದು

ಹೊಸಬರು ಮಾಡುವ ತಪ್ಪೇನೆಂದರೆ, ಕಾಯಿನ್ ಅನ್ನು ಸುಮ್ಮನೆ ಖರೀದಿಸುವುದು ಏಕೆಂದರೆ ಅದು ತುಂಬಾ ಅಗ್ಗವಾಗಿದೆ ಅಥವಾ ಒಬ್ಬ ವ್ಯಕ್ತಿ ಅಥವಾ ಗುಂಪಿನಿಂದ ಅನುಮೋದಿಸಲಾಗಿದೆ. ಈ ವರ್ಗದಲ್ಲಿ ಬೀಳುವ ಹೆಚ್ಚಿನ ಕಾಯಿನ್‌ಗಳು ಯಾವುದೇ ಬಳಕೆಯ ಸಂದರ್ಭವನ್ನು ಹೊಂದಿಲ್ಲ ಅಥವಾ ಬಹಳ ಸೀಮಿತ ಬಳಕೆಯ ಸಂದರ್ಭವನ್ನು ಹೊಂದಿಲ್ಲ, ಅಥವಾ ಉತ್ತಮ ಸಂದರ್ಭದ ಸನ್ನಿವೇಶ – ಇನ್ನೂ ಅವುಗಳ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾಗಿದೆ. ಈ ತಪ್ಪನ್ನು ತಪ್ಪಿಸಲು ಅದರ ಟೋಕನ್ ಬೆಲೆಯ ಬದಲಿಗೆ ಕಾಯಿನ್ ಮಾರುಕಟ್ಟೆ ಕ್ಯಾಪ್ ಅನ್ನು ಪರಿಶೀಲಿಸಿ. ಏಕೆಂದರೆ ಕ್ರಿಪ್ಟೋ ತನ್ನ ಬೆಲೆಯನ್ನು ಎಷ್ಟು ಪಂಪ್ ಮಾಡಬಹುದು ಎಂಬುದನ್ನು ನಿರ್ಧರಿಸುವ ಮಾರುಕಟ್ಟೆ ಕ್ಯಾಪ್ ಇದಾಗಿದೆ.

ಬೆಳವಣಿಗೆಯ ವಿಷಯದಲ್ಲಿ ಕ್ರಿಪ್ಟೋ ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ಪರಿಶೀಲಿಸುವುದು ಹೇಗೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ಅದೇ ಕಾಯಿನ್ ವರ್ಗದಲ್ಲಿರುವ ಇತರ ಕಾಯಿನ್‌ಗಳನ್ನು ಪರಿಶೀಲಿಸಿ ಮತ್ತು ಅದು   ಎಷ್ಟರ ಮಟ್ಟಿಗೆ ನಿಂತಿದೆ ಎಂಬುದನ್ನು ನೋಡಲು ಅವರ ದೈನಂದಿನ ಟ್ರೇಡ್ ಮಾಡಿದ ಪ್ರಮಾಣ, ಮಾರುಕಟ್ಟೆ ಕ್ಯಾಪ್ ಮತ್ತು ಆನ್‌ಲೈನ್ ತೊಡಗಿಸಿಕೊಳ್ಳುವಿಕೆಯನ್ನು ಹೋಲಿಕೆ ಮಾಡಿ.

ಅನುಮೋದನೆಗಳ ಕಾರಣದಿಂದಾಗಿ ಕಾಯಿನ್ ಅನ್ನು ಖರೀದಿಸುವುದು

ಕ್ರಿಪ್ಟೋಕರೆನ್ಸಿಯನ್ನು ಸಾರ್ವಜನಿಕ ವ್ಯಕ್ತಿಯಿಂದ ಪ್ರಚಾರ ಮಾಡಿಸುತ್ತಿರುವುದರಿಂದ ನೀವು ಎಂದಿಗೂ ಅದರಲ್ಲಿ ಹೂಡಿಕೆ ಮಾಡಬಾರದು. ಅವರು ಮಾರುಕಟ್ಟೆ ಪೂರೈಕೆಯ ದೊಡ್ಡ ಪಾಲನ್ನು ಹೊಂದಿರುವ ಸಾಧ್ಯತೆಯಿದೆ. ಸಾಕಷ್ಟು ಜನರು ಕಾಯಿನ್ ಅನ್ನು ಖರೀದಿಸಿದರೆ, ಸಾರ್ವಜನಿಕ ವ್ಯಕ್ತಿಗಳು ತಮ್ಮ ಕಾಯಿನ್‌ಗಳನ್ನು ಮಾರಾಟ ಮಾಡಲು ಮತ್ತು ಅಚ್ಚುಕಟ್ಟಾದ ಲಾಭವನ್ನು ಗಳಿಸಲು ನಿರ್ಧರಿಸಬಹುದು, ನಿಯಮಿತ ಹೂಡಿಕೆದಾರರು ನಷ್ಟದಲ್ಲಿ ಮುಳುಗುತ್ತಾರೆ.

ಉತ್ತಮ ಗುಣಮಟ್ಟದ ಕಾಯಿನ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಜಾಹೀರಾತಿನ ಅಗತ್ಯವಿಲ್ಲದ ಕಾರಣ ಪ್ರಸಿದ್ಧ ವ್ಯಕ್ತಿಗಳಿಂದ ಸೀಲ್ ಮಾಡಿದ ಎಲ್ಲಾ ಕಾಯಿನ್‌ಗಳನ್ನು ತಪ್ಪಿಸಿ. ಕಾಯಿನ್ ಅನ್ನು ಖರೀದಿಸುವ ಮೊದಲು ಅದರ ವೈಟ್‌ಪೇಪರ್ ಅನ್ನು ಓದುವುದು ಒಳ್ಳೆಯದು ಮತ್ತು ಇದು ಸಂಭವಿಸಬಹುದಾದ ಯಾವುದೇ ಹಗರಣಗಳಿಗೆ ಬಲಿಯಾಗುವುದನ್ನು ತಡೆಯುತ್ತದೆ.

ಸಾಮಾಜಿಕ ಮಾಧ್ಯಮದಿಂದಾಗಿ ಕಾಯಿನ್ ಅನ್ನು ಖರೀದಿಸುವುದು

ರೆಡ್ಡಿಟ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಮಾಧ್ಯಮ ಸೈಟ್‌ಗಳು ನೀವು ಬಹುಶಃ ಕೇಳಿರದ ಕಾಯಿನ್‌ಗಳಿಗಾಗಿ ಅಥವಾ ವಿಪರೀತ ಬಳಕೆಯ ಪ್ರಕರಣಗಳೊಂದಿಗೆ ಕಾಯಿನ್‌ಗಳಿಗಾಗಿ ಪೇಜ್‌ಗಳಿಂದ ತುಂಬಿವೆ. ನೀವು ಸಾಕಷ್ಟು ಸಮಯವನ್ನು ಹಿಡಿದಿಟ್ಟುಕೊಂಡರೆ ಅವರು ಸಾಮಾನ್ಯವಾಗಿ ‘ಗಗನಕ್ಕೇರುತ್ತಿರುವ’ ಬೆಲೆಗಳ ಬಗ್ಗೆ ಮಾತನಾಡುತ್ತಾರೆ. ಒಂದು ನಿರ್ದಿಷ್ಟ ಕಾಯಿನ್‌ಗಾಗಿ ಶಿಲ್ ಮಾಡುವ ಪ್ರತಿಯೊಬ್ಬರೂ ಡೆವಲಪರ್‌ಗಳಿಂದ ಪಾವತಿಸುತ್ತಾರೆ ಅಥವಾ ಯೋಜನೆಯಲ್ಲಿ ಹೆಚ್ಚು ಸಮಯ ಮತ್ತು ಹಣವನ್ನು ಹೂಡಿಕೆ ಮಾಡಿದ್ದಾರೆ, ಇದರ ಪರಿಣಾಮವಾಗಿ ಅವರು ಅದರ ಪರವಾಗಿ ಹೆಚ್ಚು ಪಕ್ಷಪಾತ ಮಾಡುತ್ತಾರೆ ಎಂಬುದನ್ನು ನೆನಪಿನಲ್ಲಿಡಿ. 

ಸಾಮಾಜಿಕ ಮಾಧ್ಯಮದಲ್ಲಿನ ಪ್ರಚೋದನೆಯಿಂದ ಕುರುಡಾಗುವುದನ್ನು ತಡೆಯಲು, DYOR ಅಥವಾ ನಿಮ್ಮ ಸ್ವಂತ ಸಂಶೋಧನೆ ಮಾಡುವುದು ಮುಖ್ಯ. ನಿಮ್ಮ ಸ್ವಂತ ಸಂಶೋಧನೆಯನ್ನು ಮಾಡುವುದು ಕಾಯಿನ್‌ನ ಭವಿಷ್ಯದ ಸಾಮರ್ಥ್ಯವನ್ನು ಹೊಂದಿದೆಯೇ ಅಥವಾ ಆರಂಭಿಕರನ್ನು ಆಕರ್ಷಿಸಲು ಬಳಸಲಾಗುವ ಹಗರಣವಾಗಿದೆಯೇ ಎಂಬುದನ್ನು ತಿಳಿದುಕೊಳ್ಳುವ ಖಚಿತವಾದ ಮಾರ್ಗವಾಗಿದೆ.

ಮಾರುಕಟ್ಟೆ ಕುಸಿಯುತ್ತಿರುವ ಕಾರಣ ಮಾರಾಟ ಮಾಡುವುದು

ಅನುಭವಿ ವ್ಯಾಪಾರಿಗಳು ಕೂಡ ಕೆಲವು ಸಂದರ್ಭಗಳಲ್ಲಿ ಬಲಿಯಾಗಬಹುದಾದಂತಹ ತಪ್ಪು ಇದಾಗಿದೆ. ಮಾರುಕಟ್ಟೆ ಕುಸಿತದ ಭಯಗಳು ಈಕ್ವಿಟಿ ಮತ್ತು ಕ್ರಿಪ್ಟೋ ಪರಿಸರ ವ್ಯವಸ್ಥೆ ಎರಡರಲ್ಲೂ ನಿರಂತರವಾಗಿರುತ್ತವೆ. ಮಾರುಕಟ್ಟೆಯ ಕುಸಿತವು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಜನರು ಸಾಮಾನ್ಯವಾಗಿ ಮರೆತುಬಿಡುತ್ತಾರೆ. ಕುಸಿತವನ್ನು ಪಂಪ್ ಅನುಸರಿಸುತ್ತದೆ; ಬೇಗ ಅಥವಾ ತಡವಾಗಿ. ಈ ಸಂದರ್ಭದಲ್ಲಿ, ಕೇವಲ ಹೋಲ್ಡ್ ಮಾಡುವುದು ಉತ್ತಮ ಪರಿಹಾರವಾಗಿದೆ. ಅಥವಾ ಕನಿಷ್ಠ, ಕೆಳಮಟ್ಟದಲ್ಲಿರುವುದನ್ನು ಮಾರಬೇಕು.

ನಮಗೆಲ್ಲರಿಗೂ ತಿಳಿದಿರುವಂತೆ, ಮಾರುಕಟ್ಟೆಯು ಅನಿರೀಕ್ಷಿತವಾಗಿದೆ. ಫೆಬ್ರವರಿಯಲ್ಲಿ, ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದಿಂದಾಗಿ ಭಾರೀ ಕುಸಿತದ ಭಯವಿತ್ತು. ಮರುದಿನ, ಈ ಭಯಗಳು ವ್ಯರ್ಥವಾಯಿತು ಏಕೆಂದರೆ ವಾಸ್ತವವಾಗಿ ಕೆಳಗಿಳಿಯುವ ಬದಲು ಮಾರುಕಟ್ಟೆಗಳು ಮೇಲಕ್ಕೆ ಹೋದವು.

ಆಲ್ ಇನ್‌ಗೆ ಹೋಗುವುದು

ಒಬ್ಬರು ಮಾಡಬಹುದಾದ ಅತ್ಯಂತ ಕೆಟ್ಟ ತಪ್ಪು ಎಂದರೆ ಅವರ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸದಿರುವುದು ಮತ್ತು ಅವರ ಎಲ್ಲಾ ಹಣವನ್ನು ಒಂದೇ ಕಾಯಿನ್ ಮೇಲೆ ಹೂಡಿಕೆ ಮಾಡುವುದು. ಇದು ಎಂದಾದರೂ ಒಂದು ಬಾರಿ ಕೆಲಸ ಮಾಡುತ್ತದೆ, ಹೆಚ್ಚಿನ ಸಂಧರ್ಭದಲ್ಲಿ ಅದಾಗುವುದಿಲ್ಲ, ಇದು ಒಂದು ಭಯಾನಕ ಕಲ್ಪನೆಯಾಗಿದೆ. ಯಾವುದೇ ಒಂದು ಕಾಯಿನ್‌ನಲ್ಲಿ ದೊಡ್ಡ ಹೂಡಿಕೆಯು ದೊಡ್ಡ ಅಪಾಯವಾಗಿದೆ, ಏಕೆಂದರೆ ಒಂದು ಸಣ್ಣ ಇಳಿಕೆ ಕೂಡ ನಿಮ್ಮ ಲಾಭದ ಹೆಚ್ಚಿನ ಶೇಕಡಾವನ್ನು ಅಳಿಸಿಹಾಕುತ್ತದೆ.

ಇದನ್ನು ತಡೆಯುವ ಏಕೈಕ ಮಾರ್ಗವೆಂದರೆ ನಿಮ್ಮ ಪೋರ್ಟ್‌ಫೋಲಿಯೊವನ್ನು ವೈವಿಧ್ಯಗೊಳಿಸುವುದು. ನಿಮ್ಮ ಕ್ರಿಪ್ಟೋ ಪೋರ್ಟ್‌ಫೋಲಿಯೊದ ವೈವಿಧ್ಯೀಕರಣವು ಒಂದು ಉತ್ತಮ ಕ್ರಮವಾಗಿದೆ ಮತ್ತು ಒಂದು ಕ್ರಿಪ್ಟೋ ಕಡಿಮೆಯಾದ ಸಂಧರ್ಭದಲ್ಲಿ ನಿಮ್ಮ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಸಮಾರೋಪ

“ಕ್ರಿಪ್ಟೋದಲ್ಲಿ ಹೂಡಿಕೆ ಮಾಡುವಾಗ ಮಾಡಬಾರದ ವಿಷಯಗಳ” ಪಟ್ಟಿಯನ್ನು ನೋಡಿದ ನಂತರ, ಆಶಾದಾಯಕವಾಗಿ, ಕ್ರಿಪ್ಟೋ ಟ್ರಾವೆರ್ ಎಷ್ಟು ಸಮಯದವರೆಗೆ ಟ್ರೇಡಿಂಗ್ ಮಾಡುತ್ತಿದ್ದರೂ ಅವರು ಮಾಡಬಹುದಾದ ಕೆಲವು ಸಾಮಾನ್ಯ ತಪ್ಪುಗಳ ಬಗ್ಗೆ ನೀವು ಸ್ವಲ್ಪ ಹೆಚ್ಚು ತಿಳಿದಿರುತ್ತೀರಿ. ಈ ಮಾಹಿತಿಯೊಂದಿಗೆ ಶಸ್ತ್ರಸಜ್ಜಿತವಾಗಿ, ನೀವು ಮುಂದೆ ಯಾವ ಕಾಯಿನ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದೀರಿ?

ಹಕ್ಕು ನಿರಾಕರಣೆ: ಕ್ರಿಪ್ಟೋಕರೆನ್ಸಿ ಕಾನೂನುಬದ್ಧ ಟೆಂಡರ್ ಅಲ್ಲ ಮತ್ತು ಪ್ರಸ್ತುತ ಅನಿಯಂತ್ರಿತವಾಗಿದೆ. ಕ್ರಿಪ್ಟೋಕರೆನ್ಸಿಗಳನ್ನು ಟ್ರೇಡ್ ಮಾಡುವಾಗ ನೀವು ಸಾಕಷ್ಟು ಅಪಾಯದ ಮೌಲ್ಯಮಾಪನವನ್ನು ಕೈಗೊಳ್ಳುತ್ತೀರಿ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಅವುಗಳು ಹೆಚ್ಚಿನ ಬೆಲೆಯ ಚಂಚಲತೆಗೆ ಒಳಗಾಗುತ್ತವೆ. ಈ ವಿಭಾಗದಲ್ಲಿ ಒದಗಿಸಲಾದ ಮಾಹಿತಿಯು ಯಾವುದೇ ಹೂಡಿಕೆ ಸಲಹೆ ಅಥವಾ WazirX ನ ಅಧಿಕೃತ ಸ್ಥಾನವನ್ನು ಪ್ರತಿನಿಧಿಸುವುದಿಲ್ಲ. ಈ ಬ್ಲಾಗ್ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಕಾರಣಗಳಿಗಾಗಿ ಪೂರ್ವ ಸೂಚನೆಯಿಲ್ಲದೆ ತಿದ್ದುಪಡಿ ಮಾಡುವ ಅಥವಾ ಬದಲಾಯಿಸುವ ಹಕ್ಕನ್ನು WazirX ತನ್ನ ಸ್ವಂತ ವಿವೇಚನೆಯಿಂದ ಕಾಯ್ದಿರಿಸಿಕೊಂಡಿದೆ.

Leave a Reply